ಮಹುವಾ ಮುಖರ್ಜಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಗೌಡಿಯಾ ನೃತ್ಯಗರಾರಾಗಿದ್ದಾರೆ. ಅವರು ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರು ಮತ್ತು ಅಧ್ಯಾಪಕರಾಗಿದ್ದಾರೆ. ಅವರು ಜನವರಿ ೨೦೧೪ ರ ಸಮಯಕ್ಕೆ ಲಲಿತಕಲೆಗಳ ವಿಭಾಗದ ಡೀನ್ ಆಗಿದ್ದರು. ಅವರ ಪತಿ ಅಮಿತವ ಮುಖರ್ಜಿ ಜೊತೆಗೆ, ಅವರು ೧೯೮೦ ರ ದಶಕದಿಂದ ತಮ್ಮ ವೃತ್ತಿಜೀವನದ ಮೂಲಕ ನೃತ್ಯ ಶೈಲಿಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಯು‌ಎಸ್‌ಎ, ಓಕ್ಲಹೋಮಾ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಪ್ರದರ್ಶನಗಳು ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ಬ್ರತೀಂದ್ರನಾಥ್, ಶಶಿ ಮಹತೋ, ನರೋತ್ತಮ್ ಸನ್ಯಾಲ್, ಗಂಭೀರ್ ಸಿಂಗ್ ಮೂಧಾ, ಮುಕುಂದ್ ದಾಸ್ ಭಟ್ಟಾಚಾರ್ಯ, ಛೌ, ನಾಚ್ನಿ, ಕುಶನ್ ಮತ್ತು ಕೀರ್ತನೀಯ ಸಂಪ್ರದಾಯಗಳ ಇತರ ಅಭ್ಯಾಸಗಾರರಿಂದ ನೃತ್ಯವನ್ನು ಕಲಿತಿದ್ದಾರೆ. ಮುಖರ್ಜಿ ಅವರು ಗೌಡೀಯ ನೃತ್ಯ ಭಾರತಿ ಮತ್ತು ಮಿತ್ರಯಾನ್ ಸಂಸ್ಥೆಗಳ ನಿರ್ದೇಶಕರೂ ಆಗಿದ್ದಾರೆ. ಅವರು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ., ಪಿಎಚ್.ಡಿ ಪಡೆದಿದ್ದಾರೆ. ಆರಂಭದಲ್ಲಿ ಭರತ ನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಅವರನ್ನು ನೃತ್ಯದ "ಕಾರಂಜಿ" ಎಂದು ಪರಿಗಣಿಸಲಾಗಿದೆ. "ದಿ ಬ್ಯೂಟಿ ಐ ಹ್ಯಾವ್ ಸೀನ್: ಎ ಟ್ರೈಲಾಜಿ" ಎಂಬ ತನ್ನ ಸಂಗ್ರಹದಲ್ಲಿ ಪ್ರಕಟವಾದ ನೈಜೀರಿಯಾದ ಬರಹಗಾರ ತನುರೆ ಓಜೈಡೆ ಬರೆದ ಕವಿತೆಯ ವಿಷಯವೇ ಅವರಾಗಿದ್ದಾರೆ. ಅವರು ಭಾರತದ ಫಿಲ್ಮ್ಸ್ ಡಿವಿಷನ್ ಮಾಡಿದ ಗೀತ್ಮಯ್ ತನ್ಮಯ್ - ಟ್ರಾನ್ಸ್ ಇನ್ ಮೋಷನ್ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಪುಸ್ತಕಗಳು == ಅವರು ಬೆಂಗಾಲ್ ಶಾಸ್ತ್ರೀಯ ನೃತ್ಯ, ಗೌಡಿಯ ನೃತ್ಯ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದನ್ನು ಕೋಲ್ಕತ್ತಾದ ಏಷ್ಯಾಟಿಕ್ ಸೊಸೈಟಿಯಿಂದ ಪ್ರಕಟಿಸಲಾಗಿದೆ. == ಉಲ್ಲೇಖಗಳು ==